ಆತ್ಮ ಸಂಘರ್ಷ 


1775 ನೇ ಇಸವಿ . ವರದಪ್ಪ ನಾಯಕರ ಆಳ್ವಿಕೆಯ ಕಾಲ .  ವರ್ಷದ ದೀಪಾವಳಿಗೆ ವರದಪ್ಪ ನಾಯಕರ ಆಳ್ವಿಕೆ ಶುರುವಾಗಿ ಹದಿನೈದು ವರ್ಷಗಳು ಸಲ್ಲುತ್ತವೆನ್ಯಾಯ ನೀತಿ ಆಡಳಿತ ಪ್ರಜಾಚಿಂತನೆಯಲ್ಲಿ , ಅನ್ಯಾಯವನ್ನುಶಿಕ್ಷಿಸುವುದರಲ್ಲಿ ನಮ್ಮ ವರದಪ್ಪ ನಾಯಕರು ಹೆಸರುವಾಸಿ . ಊರಿನ ಜನರು ಕಾಣದ ದೇವರುಗಳನ್ನೆಲ್ಲ ಮರೆತು ನಮ್ಮ ನಾಯಕರನ್ನೇ ದೇವರೆಂದು ಪೂಜಿಸುತ್ತಾರೆ .ಇವರ ಆಳ್ವಿಕೆ ಶುರುವಾದ ನಂತರ ನಮ್ಮೂರ ಹೆಸರು ವರದಕೋಟೆಅಂತಲೇ ಬದಲಾಗಿ ಹೋಯ್ತು .ಅರ್ಥಶಾಸ್ತ್ರ ಪ್ರವೀಣಕಲಾಸೇವಕ , ಪಂಡಿತರುಗಳ ಪ್ರೋತ್ಸಾಹಕ , ಅಬಲರ ಬಲ ,ಶತ್ರು ಪಡೆಯ ಸಿಂಹಸ್ವಪ್ನ  ಇದೆಲ್ಲವನ್ನು ಮೀರಿ ತನ್ನ ಸ್ವಂತ ಮಗನಂತಿದ್ದ ತನ್ನ ತಮ್ಮನ ಮಗ ರಾಜದ್ರೋಹವೆಸಗಿಶತ್ರುಪಡೆಯ ಜೊತೆಯಾಗಿರುವುದು ತಿಳಿದು ಸಾರ್ವಜನಿಕವಾಗಿಯೇ ಆತನ ಕತ್ತನ್ನು ಸೀಳಿ ದಕ್ಷತೆ ಮೆರೆದ ನಾಯಕ ನಮ್ಮ ವರದಪ್ಪ ನಾಯಕ .
ರಾಜ ಪಳನಿವೇಲುವಿನ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದ ನಮ್ಮ ವರದಪ್ಪ ನಾಯಕರುಶತ್ರುಗಳ ದಾಳಿಯಲ್ಲಿ ಪಳನಿವೇಲುವಿನ ಸಾಮ್ರಾಜ್ಯ ಅವನತಿಗೆ ಬಂದು ಆತ ಸಾವನ್ನಪ್ಪಿದಾಗ ,  ಸಾಮ್ರಾಜ್ಯದಲ್ಲಿ ಅಳಿದುಳಿದ ಬೆರಳೆಣಿಕೆಯಸೈನಿಕರನ್ನು ಅವರ ಕುಟುಂಬಗಳನ್ನು ಒಗ್ಗೂಡಿಸಿ ಅವರನ್ನು ಹುರಿದುಂಬಿಸಿ , ಸ್ವಲ್ಪ ಮಾತ್ರದ ಸಂಪತ್ತು ಮತ್ತು ಯುದ್ಧಸಾಮಗ್ರಿಗಳನ್ನು ಜೊತೆಗಿಡಿದು  ಸ್ಥಳಕ್ಕೆ ಬಂದು ತಮ್ಮದೇ ಕೋಟೆ ಕಟ್ಟಿಕೊಂಡು ಕಾಲಕ್ರಮೇಣ ಹತ್ತೂರುಗಳಒಡೆಯನಾಗಿ ಮೆರೆಯುತ್ತಿರುವ ಇವರ ಸಾಧನೆಗಳನ್ನೂ 'ವರದ ಸಂಹಿತೆ ' ಎಂಬ ಗ್ರಂಥದ ಮೂಲಕ ಶ್ರುತಪಡಿಸ ಹೊರಟಿರುವ ನಮ್ಮ ಪೂಜ್ಯ ಆಸ್ಥಾನ ಪಂಡಿತರಾದ ಶ್ರೀ ದಕ್ಷಪ್ರಿಯರ ಕಾರ್ಯ ನಮ್ಮೆಲ್ಲರ ಆಜನ್ಮ ಪುಣ್ಯಕಾರ್ಯದಪ್ರತಿಫಲವೆಂದಷ್ಟೇ ಹೇಳಬಹುದು.
ಏಳು ಸುತ್ತಿನ ಕೋಟೆಯ ಒಡೆಯನ ಆಸ್ಥಾನದ ಸೇನಾಪತಿ ನಾನುಕಳೆದ ಹತ್ತು ವರ್ಷಗಳಿಂದನನ್ನ ಮಗ ಇದೆ ಸೇನೆಯ ಸೈನಿಕನನ್ನ ಹೆಂಡತಿ ಅರಮನೆಯ ಪಾಕಶಾಲಾ ಸಹಾಯಕಿ.
ಸುಮಾರು ಹತ್ತು ಸಾವಿರ ಸೈನಿಕ ಪಡೆ , ವಿನೂತನ ಯುದ್ಧ ಸಾಮಗ್ರಿಗಳು , ಮದ್ದುಗುಂಡುಗಳ ಖಜಾನೆ , ನಾಲ್ಕು ಸಾವಿರ ಕುದುರೆಗಳು ,ಕಾವಲು ಪಾಳೆಯಗಳ ನಿರ್ವಹಣೆಯನ್ನು ಮತ್ತು ಇನ್ನಿತರ ಕಾರ್ಯಗಳನ್ನು ನನ್ನ ದೊರೆಗಳು ಸೈಎನ್ನುವಂತೆ ನಿಷ್ಠೆ ಪ್ರಾಮಾಣಿಕತೆಯಿಂದ ದೈವಕಾರ್ಯ ಎಂಬಂತೆ ಮಾಡಿಕೊಂಡು ಬಂದಿದ್ದೇನೆ ಇಲ್ಲಿಯವರೆಗೆ .
ನಮ್ಮ ಸಾಮ್ರಾಜ್ಯದ ಕುಲದೈವನಾದ ಕೈಲಾಸಲಿಂಗೇಶ್ವರ  ದೇವಸ್ಥಾನದ ಕಾರ್ಯ ಭರದಿಂದ ಸಾಗುತ್ತಿದೆ .ರಾಜ್ಯ -ರಾಜ್ಯಗಳಿಂದ ಕುಶಲಕರ್ಮಿಗಳು ವಾಸ್ತು  ತಜ್ಞರು ಆಗಮಿಸಿದ್ದಾರೆ . ದೇವಸ್ಥಾನದ ಕಾರ್ಯವನ್ನು ಕಂಡು ಪ್ರಜೆಗಳುನಿಬ್ಬೆರಗಾಗಿದ್ದಾರೆ . ಇದನ್ನು ತಿಳಿದಿರುವ ಸುತ್ತಮುತ್ತಲಿನ ರಾಜರುಗಳ ಕಣ್ಣು ಕೆಂಪಾಗಿದೆ . ಅವರುಗಳು ಏನೇ ಹೊಂಚು ಹಾಕಿದರೂ ನಮ್ಮ ಸೈನಿಕ ಶಕ್ತಿ , ನಮ್ಮ ಗುಪ್ತಚರ ಮಾಹಿತಿಯ ತೀಕ್ಷ್ಣತೆಎಲ್ಲಕ್ಕೂ ಮೀರಿ ಸಾಮ್ರಾಜ್ಯವೇ ಉಸಿರುಎಂದು ಬದುಕಿರುವ ನಮ್ಮ ಪ್ರಜೆಗಳು ಇರುವವರೆಗೂ ಯಾರೇನು ಮಾಡಲು ಸಾಧ್ಯವಿಲ್ಲ . ಕಳೆದ ವರ್ಷ ಊರಸಂತೆಯ ದಿನ ಮಾರುವೇಷದಲ್ಲಿ ಸಾಮ್ರಾಜ್ಯಕ್ಕೆ ಕಾಲಿರಿಸಿದ್ದ ಶತ್ರುಪಡೆಗಳನ್ನು ಕೇವಲ ಹತ್ತಾರು ಜನರ ಯುವಕರ ಗುಂಪೊಂದುಹೊಡೆದುರುಳಿಸಿದ್ದು  ಅವಿಸ್ಮರಣೀಯ ಘಟನೆ.


ಇಂದಿನ ದೀಪಾವಳಿ ಹಬ್ಬ ನಮಗೆಲ್ಲ ಮಹಾಸಂಭ್ರಮವೇ ಸರಿ . ನಮ್ಮ ಸಾಮ್ರಾಜ್ಯದ ಹದಿನೈದನೇ ವರ್ಷದ ಆಚರಣೆ . ಕೋಟೆ ಮತ್ತು ಊರಿನ ತುಂಬೆಲ್ಲ  ರಾತ್ರಿಯೆಲ್ಲಾ ಉರಿವ ಪಂಜುಗಳು , ಹಲವು ರಾಜ್ಯಗಳಿಂದ  ವಿಭಿನ್ನ ಕಲಾವಿದರುಆಗಮಿಸಿದ್ದರು . ಸಂಪೂರ್ಣ ಸಾಮ್ರಾಜ್ಯದಲ್ಲಿ ಜಾತ್ರೆಯ ವಾತಾವರಣ . ಜನರೆಲ್ಲರೂ ಹೊಸ ಬಟ್ಟೆ ಉಟ್ಟು ರಥಬೀದಿಯಲ್ಲಿ ಕಂಗೊಳಿಸುತ್ತಿದ್ದಾರೆರಸ್ತೆಯ ಬದಿಗಳಲ್ಲೆಲ್ಲ ಸ್ಥಾಪಿತವಾಗಿದ್ದ ಮಿಠಾಯಿ ಅಂಗಡಿ ಬಳೆ ಅಂಗಡಿಗಳು ಆಟಿಕೆಯವಸ್ತುಗಳ ಎದುರು ಮಕ್ಕಳು ಗುಂಪು ಗುಂಪಾಗಿ ಕುತೂಹಲಭರಿತರಾಗಿ ನಿಂತಿದ್ದಾರೆ . ಹೋಮ ಹವನಗಳಿಗಾಗಿ ಅತಿ ಸಂಖ್ಯೆಯಲ್ಲಿ ಬ್ರಾಹ್ಮಣರು ಬಂದಿಳಿದಿದ್ದಾರೆ . ಒಟ್ಟಿನಲ್ಲಿ ಸಂಭ್ರಮದ ಬಿರುಗಾಳಿ ಪ್ರಜೆಗಳ ಉಸಿರು ಸೇರಿದೆ .

ಇಂತಹ ಸಮಯಗಳಲ್ಲಿ ನನ್ನ ಕಾರ್ಯ ಹೆಚ್ಚಾಗುವುದು ಮತ್ತು ಅತಿ ಜವಾಬ್ದಾರಿಯುತವಾಗಿ ನಿರ್ವಹಿಸುವ ಅಗತ್ಯತೆ ಇರುವುದು . ಸಂಭ್ರಮದಲ್ಲಿ ಮೈಮರೆತ ಸಾಮ್ರಾಜ್ಯಕ್ಕೆ  ಶತ್ರುಪಡೆಗಳ ಉಪಟಳ ಜಾಸ್ತಿ . ಇಂತಹ ಸಮಯವನ್ನೇ ಕಾದುಹೊಂಚು ಹಾಕಿ ಬೇಹುಗಾರರ ಮೂಲಕ ವಿಷಯ ಸಂಗ್ರಹಣೆ , ಗುಪ್ತ ಮಾಹಿತಿಗಳನ್ನೂ ಕಲೆ ಹಾಕುವುದು , ಸೈನ್ಯ ಶಕ್ತಿಯ ಬಲಾಬಲವನ್ನು ತಿಳಿಯುವುದು , ಗಡಿ ವಿಚಾರಗಳನ್ನು ತಿಳಿಯುವುದರಲ್ಲಿ ಶತ್ರು ಸೈನಿಕರು ಕಾರ್ಯನಿಯೋಜಿತರಾಗಿರುತ್ತಾರೆ .
ಹಾಗಾಗಿಯೇ ಇಂದು ನಾವು ಇಂದಿನ ದಿನ ಮೈಯೆಲ್ಲಾ ಕಣ್ಣಾಗಿ ಕೋಟೆ ಮತ್ತು ಸಾಮ್ರಾಜ್ಯದ ಕಾವಲು ಕಾಯುತ್ತಿದ್ದೇವೆ.

ಮಧ್ಯರಾತ್ರಿ ಆಗಿದೆ , ಕಾವಲುಪಡೆ ಸೈನಿಕರ ಕಾರ್ಯ ಹೇಗೆ ಸಾಗುತ್ತಿದೆ ಎಂದು ಒಂದು ಸುತ್ತು  ನೋಡಿಬರೋಣವೆಂದು ಕುದುರೆ ಏರಿ ಕೋಟೆಯ ಹತ್ತಿರ ನಡೆದೆ . ಅಂಗುಲ ಅಂಗುಲಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ನಡೆದೇಪ್ರತಿ ಸೈನಿಕನುಕೂಡ ಇಷ್ಟು ದಿನಗಳಿಗಿಂತ ಹೆಚ್ಚಾಗಿಯೇ ಜಾಗೃತರಾಗಿ ಕಾವಲಿನಲ್ಲಿ ತೊಡಗಿದ್ದಾರೆ . ಕೋಟೆಯ ಎಂಟು ದಿಲ್ಕುಗಳಲ್ಲೂ ಕಲ್ಲಿನ ಸ್ತಂಭಗಳ ಮೇಲೆ ಬೃಹದಾಕಾರದ ಪಂಜುಗಳು ಉರಿಯುತ್ತಿವೆ .  ಜ್ವಾಲೆಯ ಕೆಳಗೆ ಸೈನಿಕ ಆಕಾರ ಗಳುಮುಖಗುರುತು ಸಿಗದೇ ಕೇವಲ ಕಪ್ಪು ಆಕಾರವೊಂದು ಚಲಿಸುವಂತೆ ಕಾಣುತ್ತಿವೆ.  ಸಂಪೂರ್ಣ ಕೋಟೆಯ ಅವರಣವನ್ನು ಒಂದು ಸುತ್ತು ಸುತ್ತಿ ಕೋಟೆಯ ಹಿಂಬಾಗಕ್ಕೆ ಬಂದು ನಿಂತವನಿಗೆ ಕೋಟೆಯ ಕೆಳಭಾಗದಲ್ಲಿರುವ ಅಶ್ವಥ ಮರದಹತ್ತಿರ  ನಾಲ್ಕು ಪಂಜುಗಳು ಚಿಕ್ಕ ಗಾತ್ರದಲ್ಲಿ ಉರಿಯುತ್ತಿರುವುದು ಕಂಡಿತುಅಶ್ವಥ ಕಟ್ಟೆಯಲ್ಲಿರುವ ನಾಗರ ಕಲ್ಲಿಗೆ ಯಾರೋ ಹಚ್ಚಿದ್ದಾರೆ ಎಂದುಕೊಂಡೆ ಅಷ್ಟರಲ್ಲೇ  ನಾಲ್ಕು ಪಂಜುಗಳು ಸಹ ಆಕಡೆ ಈಕಡೆ ಚಲಿಸುತ್ತಿರುವಂತೆ ಕಂಡಿತು.ನಮ್ಮ ಸೈನಿಕರೇ ಯಾರೋ ಪಹರೆ ಕಾಯುವುದನ್ನು ಬಿಟ್ಟು ಒಟ್ಟಿಗೆ ನಿಂತು ಮಾತನಾಡುತ್ತಿದ್ದಾರೆ ಎನ್ನಿಸಿ " ನಿಮಗೆ ಮಾಡ್ತೇನೆ ಇರಿ " ಎಂದುಕೊಂಡು ಕುದುರೆಯನ್ನು ಅಲ್ಲೇ ಪಕ್ಕಕ್ಕೆ ನಿಲ್ಲಿಸಿ ಖಡ್ಗ ಹಿಡಿದು ನಿಧಾನವಾಗಿ ಕಳ್ಳಹೆಜ್ಜೆಯಲ್ಲಿಮೆಟ್ಟಿಲಿಳಿದು ಹೊರಟೆತೀರಾ ಅವರ ಹತ್ತಿರಕ್ಕೆ ಸಮೀಪಿಸಿ ಮರವೊಂದರ ಹಿಂದೆ ಅಡಗಿ ಕುಳಿತು ಅವರನ್ನು ಗಮನಿಸಿದೆ . ವೃತ್ತಾಕಾರದಲ್ಲಿ ನಿಂತು ಕೇವಲ ಒಂದೇ ಪಂಜನ್ನು  ಕೈಯಲ್ಲಿ ಹಿಡಿದು ಗುಸುಪಿಸು ಮಾತನಾಡುತ್ತಿದ್ದರುಮೂರುಜನರ ಮುಖ ಅಸ್ಪಷ್ಟವಾಗಿ ಕಾಣಿಸುತ್ತಿದೆ ಒಬ್ಬ ನನಗೆ ಬೆನ್ನು ಮಾಡಿ ನಿಂತಿದ್ದಾನೆ . ಬೆನ್ನುಮಾಡಿ ನಿಂತವನ ವೇಷಭೂಷಣ ಸ್ವಲ್ಪ ಪರಿಚಯದಂತೆ ಅನ್ನಿಸಿದರೂ ಕೂಡ ಉಳಿದವರದ್ದು ಮಾತ್ರ ತುಂಬಾ ವಿಶೇಷವೆನಿಸಿತು
ಖಡ್ಗವನ್ನು ಬಿಗಿಯಾಗಿ ಹಿಡಿದು ಸಿದ್ಧಗೊಳ್ಳುತ್ತ  ಮರದ ಮರೆಯಿಂದ ಸ್ವಲ್ಪ ಮಾತ್ರವೆನ್ನುವಷ್ಟು ಹೊರಬಂದು "ಯಾರದುಎಂದು ಕೂಗಿದೆ . 
ನಾನು ಕೂಗಿದೊಡನೆಯ ನನಗೆ ಬೆನ್ನು ಮಾಡಿ ನಿಂತಿದ್ದ ವ್ಯಕ್ತಿ ತಕ್ಷಣವೇ ಹಿಂತಿರುಗಿ ಸುತ್ತಲೂ ನೋಡುತ್ತಲೇ "ಓಡಿ ....ಓಡಿ ..." ಎಂದು ಎಲ್ಲರು ಓಡತೊಡಗಿದರು
ನನಗೆ ಬೆನ್ನು ಮಾಡಿ ನಿಂತಿದ್ದ  ವ್ಯಕ್ತಿ ಯಾರೆಂದು ಸ್ಪಷ್ಟವಾಗಿ ತಿಳಿಯಿತುಬೇರಾರು ಅಲ್ಲ ಆತ ನನ್ನ ಸ್ವಂತ ಮಗನೆ ಆಗಿದ್ದ . ಯಾಕೆ ಓಡಿಹೋದನೆಂದು ತಿಳಿಯಲಿಲ್ಲಬಹುಷ ಕರೆದದ್ದು ನಾನೆಂದು ತಿಳಿಯಲಿಲ್ಲ ಆತನಿಗೆ ಬೇರೆ ಯಾರೋಎಂದು ಹೆದರಿ ಓಡಿದ್ದಾನೆ . ಸ್ನೇಹಿತರ ಜೊತೆ ಸೇರಿಕೊಂಡು ಏನೋ ಪುಂಡಾಟಿಕೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತ  ಅವರು ಓಡಿದ ದಿಕ್ಕಿಗೆ ಓಡಿದೆ . ಓಡುತ್ತ ಓಡುತ್ತಾ ಅವನ ಹೆಸರನ್ನು ಕೂಗಿ ಕರೆದೆ " ಏಯ್ ಯಾಕೆ ಓಡ್ತಿದೀಯಾ , ನಾನುಕಣೋ , ನಿಂತ್ಕೋ " ಎಂದು ಜೋರಾಗಿ ಕೂಗಿ ಕರೆಯುತ್ತ ಅವರ ಹಿಂದೆಯೇ ಓಡತೊಡಗಿದೆ.
ಸ್ವಲ್ಪ ದೂರ ಓಡಿದೊಡನೆ ಎದುರಿನಲ್ಲಿ ಆತ ಒಬ್ಬನೇ ನನ್ನೆಡೆ  ಮುಖ ಮಾಡಿ ನಿಂತಿರುವದು ಬೆಳದಿಂಗಳಿನ ಅಸ್ಪಷ್ಟ ಬೆಳಕಿನಲ್ಲಿ ಕಾಣಿಸಿತು . ಕೈಯಲ್ಲಿ ಖಡ್ಗ ಹಿಡಿದಿದ್ದ .
"ಏಯ್ ಯಾಕೆ ಓಡ್ತಿದೀಯಾ , ಏನ್ ಮಾಡ್ತಾ ಇದ್ರಿ ಅಲ್ಲಿ , ಅವ್ರೆಲ್ಲ ಯಾರು ? ಎಲ್ಲಿ ಹೋದ್ರು ಈವಾಗ ? " ಎಂದು ಒಂದೇ ಸಮನೆ ಪ್ರಶ್ನೆಗಳನ್ನು ಕೇಳುತ್ತ ನನ್ನ ಕೈಲಿದ್ದ ಖಡ್ಗವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು , ಕೈನಲ್ಲಿ ಖಡ್ಗ ಹಿಡಿದು ನಿಂತಿದ್ದನನ್ನ ಮಗನ ಹತ್ತಿರಕ್ಕೆ ನಡೆದುಬಿಟ್ಟೆ .....!!

                                              *                             *                            *


                
ಬೃಹದಾಕಾರದ ಅಶ್ವಥ ಮರದ ಸುತ್ತ ಸಂಪೂರ್ಣ ಊರಿಗೆ ಊರೇ ಕಿಕ್ಕಿರಿದು ಬಂದು ಸೇರಿದೆಮರದ ಸುತ್ತಲಿನ ಸುಮಾರು ಐವತ್ತು ಅಂಗುಲದಷ್ಟು ಜಾಗವನ್ನು ವೃತ್ತಾಕಾರದಲ್ಲಿ ಗುರುತು ಮಾಡಿ ಯಾರು ಕೂಡ ಒಳಪ್ರವೇಶಿಸದಂತೆ ತಡೆಮಾಡಿದ್ದಾರೆವೃತ್ತಾಕಾರದ ಒಳಗಡೆಯಲ್ಲಿ , ಒಬ್ಬ ಹಿರಿಯ ವಯಸ್ಸಿನ ವಿದೇಶಿ ಪುರುಷ , ಇಬ್ಬರು ಮಹಿಳೆಯರು ಮತ್ತೈದು ಜನ ಹಿಂದಿ ಮಾತಾಡುವ ಭಾರತೀಯ ಯುವಕರು ಮತ್ತು ಊರಿನವರ ಮಾತುಗಳನ್ನು ಅವರಿಗೆ ಅರ್ಥಮಾಡಿಸುವ ಭಾಷಾನುವಾದಕಾರನೊಬ್ಬ ಅವರ ಜೊತೆ ಕುಳಿತಿದ್ದಾನೆ . ಬೆಳಿಗ್ಗೆ ಹತ್ತರ ಸಮಯ . ಹಳದಿ ಬಣ್ಣದ ಎರಡು ಬಸ್ಸುಗಳು ಮರದ ಹತ್ತಿರ ನಿಂತಿದ್ದಾವೆಬಸ್ಸಿನಿಂದ ಬಗೆ ಬಗೆಯ ಯಂತ್ರಗಳನ್ನು , ದೊಡ್ಡ ಗಾತ್ರದ ಕೇಬಲ್ಉಂಡೆಗಳನ್ನು , ವಿಚಿತ್ರ ರೀತಿಯ ಕ್ಯಾಮೆರಾ ಗಳನ್ನೂ , ವಿದ್ಯುತ್ ದೀಪಗಳನ್ನು , ಸೆನ್ಸರ್ಗಳನ್ನೂ ಕೆಳಗಿಳಿಸಿ ಬೇಕಾದ ಸ್ಥಳಗಳಲ್ಲಿ ಜೋಡಿಸುತ್ತಿದ್ದಾರೆ . ಇದನ್ನು ದೂರದಿಂದಲೇ ನೋಡುತ್ತಿರುವ ಊರಿನ ಜನರೆಲ್ಲಾ ಪ್ರತಿಯೊಂದನ್ನು ತಮಗೆಅರ್ಥವಾಗುವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತ ಅದನ್ನು ಪಕ್ಕದವರಿಗೂ ಅರ್ಥೈಸುತ್ತ  ಮುಂದೆ ನಡೆಯುವ ಎಲ್ಲ ಸಂದರ್ಭಗಳನ್ನು ತಮ್ಮ ಬುದ್ಧಿಮತ್ತೆಗೆ ತಕ್ಕಂತೆ ಯೋಚಿಸುತ್ತ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆಯನ್ನು ಕೂಡಮರೆತು ಕುಳಿತಿರುವ 'ವರಕೋಟೆ ' ಎಂಬ ಊರಿನ ಜನರ ಮಧ್ಯದಿಂದ ಮುದುಕನೊಬ್ಬ "  ಮಿಷಿನ್ ಹೋಗಿ ದೆವ್ವ ಹಿಡಿತದ ...? ಇಲ್ಲಾ  ದೆವ್ವನೆ  ಮಿಷಿನ್ ನೋಡಿ ಓಡ್ತದ ..? ನಂಗಂತೂ ಅರ್ಥ ಆಗೂದಿಲ್ಲಪ್ಪ " ಎಂದೊಂಡನೆ ಸುತ್ತಮುತ್ತ ಕುಳಿತಿದ್ದ ನಾಲ್ಕು ಜನ ಕಾಲೇಜು ಹುಡುಗರು ಗೊಳ್ಳೆಂದು ನಕ್ಕರು
ಮರದ ಕೆಳಗೆ ಕುಳಿತಿದ್ದ 'ಅಧಿಸಾಮಾನ್ಯ ಚಟುವಟಿಕೆಗಳ ಸಂಶೋಧನ ತಂಡ'(Paranormal Activities Research Team) ನೆರೆದಿದ್ದ ಗುಂಪಿನಿಂದ ವಿಷಯದ ಬಗ್ಗೆ ತಿಳಿದಿರುವ ನಾಲ್ಕೈದು ಜನರು ತಮ್ಮ ಹತ್ತಿರ ಬರಬೇಕೆಂದು ಕರೆದರು .  ಕಾರ್ಯಕ್ಕಾಗಿಯೇ ಸಿದ್ದವಾಗಿದ್ದ ಊರಿನ ನಾಲ್ಕು ಜನರು  ತಂಡದ ಹತ್ತಿರಕ್ಕೆ ನಡೆದರು
ತಂಡದಲ್ಲಿದ್ದ ಭಾಷಾನುವಾದಕರನು ವಿದೇಶಿ ಪುರುಷನು ಕೇಳಿದ ಪ್ರಶ್ನೆಗಳನ್ನು ಊರಿನವರಿಗೆ ಅರ್ಥೈಸಿ ಕೇಳಿ ಅವರಿಂದ ಉತ್ತರ ಪಡೆದು ಮತ್ತೆ ಅದನ್ನು ವಿದೇಶಿ ಪುರುಷನಿಗೆ ವಿವರಿಸಿ ಹೇಳುತ್ತಿದ್ದನು

"ಸಾರ್ ಇಲ್ಲಿ ತುಂಬಾ ವರ್ಷಗಳಿಂದ ಈತರ ಆಗ್ತಾ ಇದೆ , ನಾವು ಹುಟ್ಟೋಕು ಮೊದ್ಲು ನಮ್ಮ ಅಜ್ಜ ಮುತ್ತಜ್ಜ  ಕಾಲದಲ್ಲೂ ಹೀಗೆ ಆಗ್ತಿತ್ತಂತೆ . ನಮಗೆಲ್ಲ ಅಷ್ಟೇನೂ ಹೆದರಿಕೆ ಇಲ್ಲ ಸಾರ್ ಅಭ್ಯಾಸ ಆಗಿದೆಸಂಜೆ ಆರರಿಂದ ಏಳರ ನಂತರಯಾರೋ ಅಳುವಂತೆ ಕೇಳುತ್ತದೆ ,ಅಳುತ್ತ  ಮೇಲಿನ ದಿಬ್ಬದಿಂದ ಕೆಳಗಿಳಿದು ಈಬದಿಗೆ ಹೋಗುವಂತೆ ಅನಿಸುತ್ತದೆಮತ್ತೆ ಕೆಲವೊಮ್ಮೆ ಕತ್ತಿ ಮಸೆಯುವ ಶಬ್ಧ ಕೇಳಿಸುತ್ತದೆ . ಇನ್ನೂ ಕೆಲವೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದನ್ನು ತುಂಬಾ ಜನನೋಡಿದ್ದಾರೆ ಸಾರ್ . ಅದರಲ್ಲೂ ವಿಶೇಷವಾಗಿ ದೀಪಾವಳಿ ದಿನ ಆರ್ಭಟ ಜಾಸ್ತಿ ." ಎಂದು ಇನ್ನಿತರ ವಿಚಾರಗಳನ್ನು ಒಬ್ಬರಾದಮೇಲೆ ಒಬ್ಬರು ಅರುಹಿದರು .

"ಎಲ್ಲ ಜನರನ್ನು ವಾಪಾಸ್ ಹೋಗಿನಾವು ಹೇಳೋವರೆಗೂ ಯಾರು ಬಾರೋ ಹಾಗಿಲ್ಲ  ಸ್ಥಳಕ್ಕೆ , ಇದನ್ನು ಮೀರಿ ಬಂದು ಏನಾದರು ಅನಾಹುತವಾದಲ್ಲಿ ಅದಕ್ಕೆ ನಾವು ಹೊಣೆಯಲ್ಲ " ಎಂದು ಊರ ಜನರಿಗೆಲ್ಲ ಹೇಳಿ ಕಳುಹಿಸಿದರು.
ಊರಿನ ಜನರೆಲ್ಲಾ ಗುಸು ಗುಸು ಮಾತನಾಡುತ್ತ , ತಮ್ಮಷ್ಟಕ್ಕೆ ತಾವೇ ಏನೇನೋ ಕಲ್ಪಿಸಿಕೊಳ್ಳುತ್ತಾ ಮನೆಯ ಹಾದಿ ಹಿಡಿದರುಸ್ಥಳದಲ್ಲೇ ಉಳಿದ ತಂಡದ ಸದಸ್ಯರೆಲ್ಲ ತಾವು ತಂದಿದ್ದ ಉಪಕರಣಗಳನ್ನೆಲ್ಲ ಸಿದ್ದಪಡಿಸಿ ಜೋಡಿಸಿ ಆಸ್ಥಳದಿಂದಸ್ವಲ್ಪ ದೂರದಲ್ಲಿ  ಡೇರೆಯೊಂದನ್ನು ನಿರ್ಮಿಸಿ ಸಂಜೆಯ ಹೊತ್ತಿಗೆ ಡೇರೆಯೊಳಗೆ ಸೇರಿಕೊಂಡರು.


ತಂಡದಲ್ಲಿದ್ದ ಹಿರಿಯ ವಿದೇಶಿ ಪುರುಷನಿಗೆ ಮಧ್ಯರಾತ್ರಿ ಎಚ್ಚರವಾಯ್ತು , ಎಚ್ಚರವಾದೊಡನೆ ತನ್ನ ಕಂಪ್ಯೂಟರ್ ತೆಗೆದು ಅಶ್ವಥ ಮರದ ಬಳಿ ಇರಿಸಿದ್ದ ಕ್ಯಾಮೆರಾ ಗಳ ಚಿತ್ರೀಕರಣವನ್ನು ನೇರವಾಗಿ ವೀಕ್ಷಿಸುತ್ತ ಕುಳಿತ . ಯಾಕೋ ಎದ್ದು ಮರದ ಬಳಿ ಹೋಗಬೇಕೆನಿಸಿ ಟಾರ್ಚ್ ಒಂದನ್ನು ಹಿಡಿದು ಒಬ್ಬನೇ ಹೊರಟ . ಅಶ್ವಥ ಮರ ಹತ್ತಿರ ಸಮೀಪಿಸಿ ನಿಂತ , ಮರದಿಂದ ತಣ್ಣನೆ ಗಾಳಿ ಬೀಸುತ್ತಿತ್ತುಬೆಳದಿಂಗಳು ಚೆಲ್ಲಿ ನಿಂತಿತ್ತು. " wow ...... awesome “ಎಂದು ಮನಸ್ಸಲ್ಲೆಎಂದುಕೊಳ್ಳುತ್ತಿರುವಾಗಲೇ  "ಯಾರದು " ಎಂದು ಯಾರೋ ಹಿಂದಿನಿಂದ ಕರೆದಂತಾಗಿ , ಭಾಷೆ ಅರ್ಥವಾಗದಿದ್ದರೂ ಕೇವಲ ಧ್ವನಿಯನ್ನು ಗ್ರಹಿಸಿ ಹಿಂತಿರುಗಿ ನೋಡಿದನಷ್ಟೇ ...!!

ಬೆಳಗ್ಗಿನ ಜಾವ ಡೇರೆಯಿಂದ ಹೊರಬಂದ ತಂಡದವರಿಗೆತಮ್ಮ ತಂಡದ ಹಿರಿಯ ಸದಸ್ಯನ ಮೃತದೇಹದ  ಬೆನ್ನ ಮೇಲೆ  ಕತ್ತಿಯಿ ಮೊನಚಿನಿಂದ ಯಾರೋ ಗೀಚಿ ಬರೆದಂತೆ  ಕಂಡ ಪದ ........"ರಾಜದ್ರೋಹಿ" ..!!!

✍️ಸಚಿನ್ ಶೃಂಗೇರಿ.

Comments

Popular posts from this blog