ಹೆನ್ರಿ ಆಸ್ವಾಲ್ಡ್ " ನಿಮ್ಮಿಂದ ಬಹು ದೊಡ್ಡ ಉಪಕಾರವೇ ಆಯ್ತು , ಸಮಯಕ್ಕೆ ಸರಿಯಾಗಿ ನೀವು ಬರದಿದ್ದರೆ ಈ ಹೊತ್ತಿಗೆ ನನ್ನ ಕಥೆ ಅದೇನಾಗುತ್ತಿತ್ತೋ ಆ ಯೇಸುವೇ ಬಲ್ಲ .... ಈ ಊರಿಗೆ ಬಸ್ ಇರುವುದನ್ನು ವಿಚಾರಿಸದೆಯೇ ಸೀದಾ ನಡೆದು ಹೊರಟು ದಡ್ಡತನ ಮಾಡಿಕೊಂಡೆ " ಎಂದು ಒಂದೇ ಸಮನೆ ಮಾತಾಡುತ್ತಿದ್ದ , ಬೈಕ್ನ ಹಿಂಬಾಗದಲ್ಲಿ ಬೆನ್ನಿಂಗೊಂದು , ಎರಡು ಕೈಗಳಲ್ಲೂ ಎರೆಡೆರಡು ಕಪ್ಪು ಬಣ್ಣದ ವಿಚಿತ್ರಾಕಾರದ ಬ್ಯಾಗ್ ಗಳನ್ನೂ ಹಿಡಿದು ಕುಳಿತಿದ್ದ , ಕೆಂಪನೆಯ ಬಣ್ಣದ ಆರಡಿ ಎತ್ತರದ ಆ ವ್ಯಕ್ತಿ . " ಅಯ್ಯೋ , ಅದರಲ್ಲಿ ಉಪಕಾರ ಏನು ಬಂತು ಬಿಡಿ . ಯಾರೋ ನಿಮ್ಮ ಬ್ಯಾಗ್ಗಳನ್ನು ಕಿತ್ತುಕೊಳ್ಳುತ್ತಿರುವುದನ್ನು ನೋಡಿದ ಮೇಲೆಯೂ ಹಾಗೆ ಬರುವುದಕ್ಕೆ ಆಗು...