ಮಾರಿಕಣಿವೆಯ ಗುಪ್ತನಿಧಿ . " ಏಯ್ ಸೋಂಬೇರಿ . ಒಂದ್ ಹೊಂವರ್ಕ್ ಮಾಡ್ಕೊಂಡು ಬರೋಕೆ ಏನೋ ದಾಡಿ ನಿಂಗೆ ? ಕೈ ಮುಂದೆ ಹಿಡಿ , ನಿನ್ನ ಚರ್ಮ ಸುಲಿತೀನಿ ಇವತ್ತು " ಎನ್ನುತ್ತಾ ರೂಲ್ ದೊಣ್ಣೆಯನ್ನು ಹಿಡಿದು ಗದರಿಸುತ್ತ ಆ ವಿದ್ಯಾರ್ಥಿಯೆಡೆಗೆ ನಡೆದಿದ್ದೆ ಅವತ್ತು . ಆತ ನಡುಗುತ್ತ ತನ್ನ ಎಡಗೈ ಮುಂದೆ ಚಾಚಿದ್ದ . ಎಡಗೈ ಹೆಬ್ಬೆರಳ ಬುಡದಿಂದ ಕಿರುಬೆರಳ ಕೊನೆಯವರೆಗೂ ಅಂಗೈನ ಮೇಲೆ ಬಲವಾಗಿ ಸೀಳಿದಂತೆ ಕಾಣುವ ಒಣಗಿದ ಗಾಯದ ಗುರುತು . ಎಳೆ ಅಂಗೈನ ಬಿಳಿ ಚರ್ಮದ ಮೇಲೆ ಗಾಯದ ಮೇಲೆ ತಬ್ಬಿಕೊಂಡಿದ್ದ ಕಪ್ಪು ವರ್ಣದ ಚರ್ಮದಾರ . ಆ ಗಾಯವನ್ನೇ ನೋಡುತ್ತಾ ಕೋಪವೆಲ್ಲ ಇಳಿಸಿಕೊಂಡು " ಇದೇನಾಗಿದ್ದು ..?" ಎಂದು ಕೇಳಿದ್ದೆ . " ನಮ್ ಅಪ್ಪ ಬ್ಲೇಡ್...