ಹೆನ್ರಿ ಆಸ್ವಾಲ್ಡ್ " ನಿಮ್ಮಿಂದ ಬಹು ದೊಡ್ಡ ಉಪಕಾರವೇ ಆಯ್ತು , ಸಮಯಕ್ಕೆ ಸರಿಯಾಗಿ ನೀವು ಬರದಿದ್ದರೆ ಈ ಹೊತ್ತಿಗೆ ನನ್ನ ಕಥೆ ಅದೇನಾಗುತ್ತಿತ್ತೋ ಆ ಯೇಸುವೇ ಬಲ್ಲ .... ಈ ಊರಿಗೆ ಬಸ್ ಇರುವುದನ್ನು ವಿಚಾರಿಸದೆಯೇ ಸೀದಾ ನಡೆದು ಹೊರಟು ದಡ್ಡತನ ಮಾಡಿಕೊಂಡೆ " ಎಂದು ಒಂದೇ ಸಮನೆ ಮಾತಾಡುತ್ತಿದ್ದ , ಬೈಕ್ನ ಹಿಂಬಾಗದಲ್ಲಿ ಬೆನ್ನಿಂಗೊಂದು , ಎರಡು ಕೈಗಳಲ್ಲೂ ಎರೆಡೆರಡು ಕಪ್ಪು ಬಣ್ಣದ ವಿಚಿತ್ರಾಕಾರದ ಬ್ಯಾಗ್ ಗಳನ್ನೂ ಹಿಡಿದು ಕುಳಿತಿದ್ದ , ಕೆಂಪನೆಯ ಬಣ್ಣದ ಆರಡಿ ಎತ್ತರದ ಆ ವ್ಯಕ್ತಿ . " ಅಯ್ಯೋ , ಅದರಲ್ಲಿ ಉಪಕಾರ ಏನು ಬಂತು ಬಿಡಿ . ಯಾರೋ ನಿಮ್ಮ ಬ್ಯಾಗ್ಗಳನ್ನು ಕಿತ್ತುಕೊಳ್ಳುತ್ತಿರುವುದನ್ನು ನೋಡಿದ ಮೇಲೆಯೂ ಹಾಗೆ ಬರುವುದಕ್ಕೆ ಆಗುತ್ತದೆಯೇ . ವಿಷ್ಯ ಏನೆಂದರೆ ಈ ಊರಿನ ಜನರು ಅಂತವರಲ್ಲ , ಅವರ್ಯಾರು ಕೂಡ ಹೀಗೆ ಮಾಡಲು ಸಾಧ್ಯವಿಲ್ಲ . ಪಕ್ಕದ ರಸ್ತೆಯಲ್ಲಿ ಹೊಳೆಯೊಂದಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ . ಅಲ್ಲಿಗೆ ಉತ್ತರ ಭಾರತದ ಒಂದಷ್ಟು ಜನ ಕೆಲಸಕ್ಕೆ ಬಂದು ಇಲ್ಲೇ ಬೀಡು ಬಿಟ್ಟಿದ್ದಾರೆ . ಅವರು ಬಂದಮೇಲೆಯೇ , ಶಾಲೆ ಕಾಲೇಜು ಮಕ್ಕಳಿಗೆ ತೊಂ
Posts
Showing posts from March, 2018