ಮಾರಿಕಣಿವೆಯ ಗುಪ್ತನಿಧಿ . " ಏಯ್ ಸೋಂಬೇರಿ . ಒಂದ್ ಹೊಂವರ್ಕ್ ಮಾಡ್ಕೊಂಡು ಬರೋಕೆ ಏನೋ ದಾಡಿ ನಿಂಗೆ ? ಕೈ ಮುಂದೆ ಹಿಡಿ , ನಿನ್ನ ಚರ್ಮ ಸುಲಿತೀನಿ ಇವತ್ತು " ಎನ್ನುತ್ತಾ ರೂಲ್ ದೊಣ್ಣೆಯನ್ನು ಹಿಡಿದು ಗದರಿಸುತ್ತ ಆ ವಿದ್ಯಾರ್ಥಿಯೆಡೆಗೆ ನಡೆದಿದ್ದೆ ಅವತ್ತು . ಆತ ನಡುಗುತ್ತ ತನ್ನ ಎಡಗೈ ಮುಂದೆ ಚಾಚಿದ್ದ . ಎಡಗೈ ಹೆಬ್ಬೆರಳ ಬುಡದಿಂದ ಕಿರುಬೆರಳ ಕೊನೆಯವರೆಗೂ ಅಂಗೈನ ಮೇಲೆ ಬಲವಾಗಿ ಸೀಳಿದಂತೆ ಕಾಣುವ ಒಣಗಿದ ಗಾಯದ ಗುರುತು . ಎಳೆ ಅಂಗೈನ ಬಿಳಿ ಚರ್ಮದ ಮೇಲೆ ಗಾಯದ ಮೇಲೆ ತಬ್ಬಿಕೊಂಡಿದ್ದ ಕಪ್ಪು ವರ್ಣದ ಚರ್ಮದಾರ . ಆ ಗಾಯವನ್ನೇ ನೋಡುತ್ತಾ ಕೋಪವೆಲ್ಲ ಇಳಿಸಿಕೊಂಡು " ಇದೇನಾಗಿದ್ದು ..?" ಎಂದು ಕೇಳಿದ್ದೆ . " ನಮ್ ಅಪ್ಪ ಬ್ಲೇಡ್ ನಲ್ಲಿ ಕುಯ್ದಿರೋದು ಸಾರ್ ನಾನ್ ಚಿಕ್ಕೋನ್ ಇದ್ದಾಗ " ಎಂದು ಸಾಮಾನ್ಯವಾಗಿಯೇ ಉತ್ತರಿಸಿದ . " ಯಾಕೆ ಕುಯ್ದಿದ್ದು ...?" ಎಂದು ಕೇಳಿದೆ . ನಮ್ಮೂರಲ್ಲಿ ಈತರ ಕೈಗೆ ಗಾಯ ಇಲ್ಲ ಅಂದ್ರೆ ಮಕ್ಳನ್ನ ಕದ್ಕೊಂಡ್ ಹೋಗಿ ಹರಕೆಗೆ ಬಲಿ ಕೊಡ್ತಾರೆ ಸಾರ್ , ಅದ್ಕೆ ಕುಯ್ದಿರೋದು " ಎಂದ . ಅದಕ್ಕೆ ಧ್ವನಿಗೂಡಿಸಿದ
Posts
Showing posts from May, 2018