Posts

Image
ಮಾರಿಕಣಿವೆಯ   ಗುಪ್ತನಿಧಿ . " ಏಯ್   ಸೋಂಬೇರಿ .  ಒಂದ್   ಹೊಂವರ್ಕ್   ಮಾಡ್ಕೊಂಡು   ಬರೋಕೆ   ಏನೋ   ದಾಡಿ   ನಿಂಗೆ  ?  ಕೈ   ಮುಂದೆ   ಹಿಡಿ  ,  ನಿನ್ನ   ಚರ್ಮ   ಸುಲಿತೀನಿ   ಇವತ್ತು  "  ಎನ್ನುತ್ತಾ    ರೂಲ್   ದೊಣ್ಣೆಯನ್ನು   ಹಿಡಿದು   ಗದರಿಸುತ್ತ   ಆ ವಿದ್ಯಾರ್ಥಿಯೆಡೆಗೆ   ನಡೆದಿದ್ದೆ   ಅವತ್ತು .  ಆತ   ನಡುಗುತ್ತ   ತನ್ನ   ಎಡಗೈ   ಮುಂದೆ   ಚಾಚಿದ್ದ  .  ಎಡಗೈ   ಹೆಬ್ಬೆರಳ   ಬುಡದಿಂದ   ಕಿರುಬೆರಳ   ಕೊನೆಯವರೆಗೂ   ಅಂಗೈನ   ಮೇಲೆ   ಬಲವಾಗಿ   ಸೀಳಿದಂತೆ   ಕಾಣುವ   ಒಣಗಿದ ಗಾಯದ   ಗುರುತು .  ಎಳೆ   ಅಂಗೈನ   ಬಿಳಿ   ಚರ್ಮದ   ಮೇಲೆ   ಗಾಯದ   ಮೇಲೆ   ತಬ್ಬಿಕೊಂಡಿದ್ದ   ಕಪ್ಪು   ವರ್ಣದ   ಚರ್ಮದಾರ .  ಆ   ಗಾಯವನ್ನೇ   ನೋಡುತ್ತಾ    ಕೋಪವೆಲ್ಲ   ಇಳಿಸಿಕೊಂಡು  "  ಇದೇನಾಗಿದ್ದು  ..?" ಎಂದು   ಕೇಳಿದ್ದೆ  . " ನಮ್   ಅಪ್ಪ   ಬ್ಲೇಡ್   ನಲ್ಲಿ   ಕುಯ್ದಿರೋದು   ಸಾರ್   ನಾನ್   ಚಿಕ್ಕೋನ್   ಇದ್ದಾಗ  "  ಎಂದು   ಸಾಮಾನ್ಯವಾಗಿಯೇ   ಉತ್ತರಿಸಿದ  . " ಯಾಕೆ   ಕುಯ್ದಿದ್ದು  ...?"  ಎಂದು   ಕೇಳಿದೆ . ನಮ್ಮೂರಲ್ಲಿ   ಈತರ   ಕೈಗೆ   ಗಾಯ   ಇಲ್ಲ   ಅಂದ್ರೆ    ಮಕ್ಳನ್ನ   ಕದ್ಕೊಂಡ್   ಹೋಗಿ   ಹರಕೆಗೆ   ಬಲಿ   ಕೊಡ್ತಾರೆ   ಸಾರ್ ,  ಅದ್ಕೆ   ಕುಯ್ದಿರೋದು   "  ಎಂದ .  ಅದಕ್ಕೆ   ಧ್ವನಿಗೂಡಿಸಿದ  
Image
ಸಂಬಂಧಿಕರನ್ನು  ಮಾರಿಬಿಡಿ...!! @  wmw.relationship.com "ಹಲೋ ....ಹಯವದನ ಅವ್ರು ಮಾತನಾಡ್ತಾ ಇರೋದಲ್ವಾ ..?" "ಹೌದು, ನೀವ್ಯಾರು ..?" "ಶುಭೋದಯ ಸಾರ್ ..!, ನಾವು 'ರಿಲೇಷನ್ಶಿಪ್.ಕಾಮ್' ಎಂಬ ಕಂಪನಿಯಿಂದ ಕರೆ ಮಾಡ್ತಿರೋದು. 'ಜಾಬ್ ಸ್ಕ್ವೆರ್.ಕಾಮ್' ಎನ್ನೋ  ವೆಬ್ಸೈಟ್ ಒಂದರಲ್ಲಿ ಕೆಲಸಕ್ಕಾಗಿ ನಿಮ್ಮ  ರೆಸ್ಯುಮೆ ಅಪ್ಲೋಡ್ ಮಾಡಿದ್ರಲ್ಲ ಸಾರ್, ಅದನ್ನ ನೋಡಿ ನಾವು ಕರೆ ಮಾಡ್ತಿರೋದು. ಇವತ್ತು ಬಂದು ಇಂಟರ್ವ್ಯೂ ಅಟೆಂಡ್ ಮಾಡ್ತೀರಾ ಸಾರ್ ..?" "ಯಾವ್ ಥರ ಕೆಲಸ ಮೇಡಂ ..?" "ನೀವ್ ಇಂಟರ್ವ್ಯೂಗೆ  ಬಂದ್ರೆ ಎಲ್ಲ ಗೊತ್ತಾಗುತ್ತೆ , ಇವತ್ತು ಬರ್ತೀರಾ ಅಂತಾದ್ರೆ  ಅಪಾಯಿಂಟ್ಮೆಂಟ್ ಫಿಕ್ಸ್ ಮಾಡ್ಕೋತೀನಿ " "ಸರಿ ಮೇಡಂ, ಖಂಡಿತ ಬರ್ತೀನಿ, ಅಡ್ರೆಸ್ ಕಳಿಸಿಕೊಡಿ " ಎನ್ನುತ್ತಾ ಫೋನ್ ಕತ್ತರಿಸಿದ ಹಯವದನನಿಗೆ ತನ್ನನ್ನು ಇಂಟರ್ವ್ಯೂ ಗೆ ಕರೆದ ಕಂಪೆನಿಯ ಹೆಸರು ಕೇಳಿ ವಿಚಿತ್ರವೆನಿಸಿತು. ರಿಲೇಷನ್ಶಿಪ್.ಕಾಂ, ಅಂದರೆ ಮದುವೆ ಮಾಡಿಸುವ ಕಂಪೆನಿಯೊ ವೃದ್ದಾಶ್ರಮವೋ, ಯಾವ ಕರ್ಮವೋ ಏನೋ , ಅಕೌನ್ಟ್ಸ್ ,ಫೈನಾನ್ಸ್ ನಲ್ಲಿ ಕೆಲಸ ಮಾಡಬೇಕೆಂದುಕೊಂಡವನಿಗೆ ಅದೊಂದು ಬಿಟ್ಟು ಮತ್ತೆಲ್ಲ ತರಹದ ಆಫರ್ಗಳು ಬರುತ್ತಿವೆಯಲ್ಲಪ್ಪ ಎಂದುಕೊಂಡು, ಸಂದರ್ಶನಗಳ ಸಾಮಾನ್ಯ ಪ್ರಶ್ನೆಗಳನ್ನೆಲ್ಲ ಮನಸ್ಸಲ್ಲಿಯೇ ತಿರುವಿಹಾಕಿಕೊಂಡು ಸ